ತನುವಿನ ಈ ದೋಣಿಯ ಹತ್ತಿ ಹೊರಟಿದೆ ಮನವು
ಬಾಳ ಸಾಗರದಿ ತೇಲುತ ಗುರಿಯೆಂಬ ತಟಕೆ
ಆಸೆಗಳ ಹುಟ್ಟು ಹಿಡಿದು ಅಂಬಿಗನೆ ನಾನಾಗಿ
ಹೊರಟಿಹೆ ಭವಿಷ್ಯವನರಸಿ ಜಲಧಿಯ ಸಾಗಿ |
ವಿಶಾಲ ಸಾಗರದಿ ಸೆಳೆತಗಳು ನೂರು
ಸಾಗಬೇಕಿದೆ ಗುರಿಯೆಡೆಗೆ ..
ಹೆದ್ದೆರೆಗಳ ಜಯಿಸಿ, ಅಂಬುಧಿಯನೆ ಒಲಿಸಿ |
ಗುರಿಯೋ .... ಮರೀಚಿಕೇಯೋ ...??
ಮುಪ್ಪಿನೆಡೆಗೆ ಜರಿಯುತಿದೆ ತನುವು
ಕನಸ ಕೈ ಬಿಡಲೊಲ್ಲದೀ ಮನವು
ಕಣ್ಣಿಗೆ ಕಾಣ್ವುದು ,ಕೈಗೆ ಎಟುಕದು
ಬಳಿ ಹೋದಷ್ಟೂ ದೂರ ಸರಿವುದು |
ಅದೆಲ್ಲಿಯೇ ಇದ್ದರೂ ಎಲ್ಲಿ ಮಾಯವಾದರೂ
ನಾ ಹಿಂದೆ ಸರಿಯೆನು ,ಧ್ಯೇಯವನು ಸೇರುವೆನು
ನನ್ನ ಬಾಳ ಗುರಿಯನು ತಲುಪಿಯೇ ತೀರುವೆನು.
ಬಾಳ ಸಾಗರದಿ ತೇಲುತ ಗುರಿಯೆಂಬ ತಟಕೆ
ಆಸೆಗಳ ಹುಟ್ಟು ಹಿಡಿದು ಅಂಬಿಗನೆ ನಾನಾಗಿ
ಹೊರಟಿಹೆ ಭವಿಷ್ಯವನರಸಿ ಜಲಧಿಯ ಸಾಗಿ |
ವಿಶಾಲ ಸಾಗರದಿ ಸೆಳೆತಗಳು ನೂರು
ಸಾಗಬೇಕಿದೆ ಗುರಿಯೆಡೆಗೆ ..
ಹೆದ್ದೆರೆಗಳ ಜಯಿಸಿ, ಅಂಬುಧಿಯನೆ ಒಲಿಸಿ |
ಗುರಿಯೋ .... ಮರೀಚಿಕೇಯೋ ...??
ಮುಪ್ಪಿನೆಡೆಗೆ ಜರಿಯುತಿದೆ ತನುವು
ಕನಸ ಕೈ ಬಿಡಲೊಲ್ಲದೀ ಮನವು
ಕಣ್ಣಿಗೆ ಕಾಣ್ವುದು ,ಕೈಗೆ ಎಟುಕದು
ಬಳಿ ಹೋದಷ್ಟೂ ದೂರ ಸರಿವುದು |
ಅದೆಲ್ಲಿಯೇ ಇದ್ದರೂ ಎಲ್ಲಿ ಮಾಯವಾದರೂ
ನಾ ಹಿಂದೆ ಸರಿಯೆನು ,ಧ್ಯೇಯವನು ಸೇರುವೆನು
ನನ್ನ ಬಾಳ ಗುರಿಯನು ತಲುಪಿಯೇ ತೀರುವೆನು.