ಹುಟ್ಟುತಲೇ ನಾ ಕಾಣೆ ಹೆತ್ತವ್ವನ ಮೊಗವ
ಕಂಡರಿಯೆ ಎನ್ನ ಸಲಹುವ ಕುಟುಂಬವಹಾದಿಯೇ ಮನೆಯಾಯ್ತು, ಗಗನವೇ ಸೂರಾಯ್ತು
ಈ ಅನಾಥ ಬಾಳಿಗೆ ಅಪರಿಚಿತರೇ ಬಂಧುವಾಯ್ತು|
ಕಣ್ಣೀರ ಕುಡಿದೆ, ಬಿಸಿಲಲ್ಲಿ ಬೆಂದೆ
ಉದರ ನಿಮಿತ್ತ ಹಗಲಿರುಳು ದುಡಿದೆ
ಬಳಲಿ ಬಾಯಾರಿದೆ ,ಬದುಕಲಿ ನೊಂದೆ
ಒರಗಲು ಹೆಗಲಿಲ್ಲದೆ ಚಡಪಡಿಸಿದೆ |
ಆಡುವ ಕೈಗಳು ಕಲ್ಲನು ಕೆತ್ತಿದವು
ಓಡುವ ಕಾಲ್ಗಳು ಮರುಗಟ್ಟಿ ಹೋದವು
ಕಣ್ಣೀರ ಹನಿಗಳು ಮೊಗವನು ತೊಯ್ದವು
ನಾ ಕಂಡ ಕನಸುಗಳು ನುಚ್ಚು ನೂರಾದವು|
ನನ್ನ ಕಿವಿಗಳು ಎಂದೂ ಕೇಳಲಿಲ್ಲ ಅವ್ವನ ಜೋಗುಳ
ಪ್ರತಿದಿನದ ಹಾಡಾಯ್ತು ಮಾಲಿಕನ ಬೈಗುಳ
ನನ್ನ ಬಾಲ್ಯದ ಕ್ಷಣವು ಮಣ್ಣಲ್ಲಿ ಮಣ್ಣಾಯ್ತು
ಕಂಡ ಕನಸಿನ ಮನೆಯು ಕ್ಷಣದಲಿ ಕುಸಿದೋಯ್ತು
ವಿದ್ಯೆ ಕೊಡುವವರಿಲ್ಲ , ಪ್ರೀತಿ ತೋರ್ವರೆ ಇಲ್ಲ
ನನ್ನ ಈ ಮೊಗವ ತಿರಸ್ಕರಿಸುವವರೇ ಎಲ್ಲ
ಕತ್ತಲ ಖಂಡವಿದು ಬಾಳನೇ ನುಂಗಿದೆ ,
ಭರವಸೆಯ ಬೆಳಕಿಗೆ ಮನವು ಹಂಬಲಿಸಿದೆ
ಹುಟ್ಟಿಸಿದ ದೇವನು ಹುಲ್ಲು ಮೇಯಿಸದಿಹನೆ?
ನನಗೊಂದು ಬದುಕಿದೆ ,ಕನಸು ಕಾಣುವ ಹಕ್ಕಿದೆ
ಕಷ್ಟಗಳ ಕಾಲುವೆಗೆ ಸೇತುವೆಯ ಕಟ್ಟುವೆನು
ನನ್ನ ಬದುಕಿನ ಎಲ್ಲೆಯ ಛಲದಿಂದ ತಲುಪುವೆನು|
ಕತ್ತಲ ಖಂಡವಿದು ಬಾಳನೇ ನುಂಗಿದೆ ,
ಭರವಸೆಯ ಬೆಳಕಿಗೆ ಮನವು ಹಂಬಲಿಸಿದೆ
ಹುಟ್ಟಿಸಿದ ದೇವನು ಹುಲ್ಲು ಮೇಯಿಸದಿಹನೆ?
ನನಗೊಂದು ಬದುಕಿದೆ ,ಕನಸು ಕಾಣುವ ಹಕ್ಕಿದೆ
ಕಷ್ಟಗಳ ಕಾಲುವೆಗೆ ಸೇತುವೆಯ ಕಟ್ಟುವೆನು
ನನ್ನ ಬದುಕಿನ ಎಲ್ಲೆಯ ಛಲದಿಂದ ತಲುಪುವೆನು|
No comments:
Post a Comment